ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಸುದ್ದಿ - ಸಮುಚ್ಛಯ
Share
ಯಕ್ಷಗಾನ, ಬಯಲಾಟ ಸಹೋದರ ಕಲೆಗಳು: ಉಮಾಶ್ರೀ

ಲೇಖಕರು :
ಸತೀಶ್ ನಾಯಕ್ , ಪಕಳಕು೦ಜ
ಶುಕ್ರವಾರ, ಫೆಬ್ರವರಿ 27 , 2015
ಫೆಬ್ರವರಿ 27, 2015

ಯಕ್ಷಗಾನ, ಬಯಲಾಟ ಸಹೋದರ ಕಲೆಗಳು: ಉಮಾಶ್ರೀ

ಕೋಟ : ಯಕ್ಷಗಾನ ಬಯಲಾಟ ಅಕಾಡೆಮಿಯಿಂದ ಪ್ರಶಸ್ತಿ ಸ್ವೀಕರಿಸಿದ ಕಲಾವಿದರು ಈ ನೆಲದ ಎಲ್ಲ ಕಲಾ ಪ್ರಕಾರಗಳನ್ನು ಮೈಗೂಡಿಸಿಕೊಂಡ ಪ್ರತಿಭಾ ಸಂಪನ್ನರು. ಯಕ್ಷಗಾನ ಮತ್ತು ಬಯಲಾಟ ಎರಡೂ ಕಲೆಗಳು ಸಮೀಪದ ಸಂಬಂಧವನ್ನು ಹೊಂದಿದ್ದು, ಎರಡೂ ಕಲೆಗಳು ಸಹ ಸಹೋದರ ಕಲೆಗಳೆಂಬಂತೆ ಭಾಸವಾಗುತ್ತದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಉಮಾಶ್ರೀ ಅಭಿಪ್ರಾಯಪಟ್ಟರು.

ಗುರುವಾರ ಸಂಜೆ ಸಾಲಿಗ್ರಾಮ ಗುರುನರಸಿಂಹ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಬೆಂಗಳೂರಿನ ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ವತಿಯಿಂದ 2012ರಿಂದ 2014ನೇ ಸಾಲಿನ ವರೆಗಿನ ಪಾರ್ತಿ ಸುಬ್ಬ ಪ್ರಶಸ್ತಿ ಮತ್ತು 2013 ಹಾಗೂ 2014ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಶಿವರಾಮ ಕಾರಂತರು ಯಕ್ಷಗಾನ ಕಲೆಗೆ ಬಾರದೇ ಇದ್ದಿದ್ದರೆ ಈ ಕಲೆಯೂ ಸಹ ಎಲ್ಲ ಕಲೆಗಳಂತೆ ಬಡ ಕಲೆಯಾಗಿಯೇ ಉಳಿಯುತ್ತಿತ್ತು ಎಂದರು.

ಬೆಂಗಳೂರು ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪಿ.ಸಾಧು, ಹಿರಿಯ ಪತ್ರಕರ್ತ ಎ.ಈಶ್ವರಯ್ಯ, ಸಾಲಿಗ್ರಾಮ ಪಟ್ಟಣ ಪಂಚಾಯಿತಿ ಸದಸ್ಯೆ ವಸುಮತಿ ನಾಯಿರಿ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಪಾರ್ತಿ ಸುಬ್ಬ ಪ್ರಶಸ್ತಿಯನ್ನು ಡಾ. ಶಿಮಂತೂರು ನಾರಾಯಣ ಶೆಟ್ಟಿ, ಎಂ.ಆರ್.ರಂಗನಾಥ ರಾವ್ ಮತ್ತು ಜಿ.ಎಸ್. ಭಟ್ಟ ಅವರಿಗೆ ಫಲಪುಷ್ಪ ಸ್ಮರಣಿಕೆಯೊಂದಿಗೆ 1 ಲಕ್ಷ ರೂ. ನಗದನ್ನು ನೀಡಿ ಗೌರವಿಸಲಾಯಿತು. ಅಕಾಡೆಮಿಯ 2013ರ ಗೌರವ ಪ್ರಶಸ್ತಿಯನ್ನು ಮಲ್ಪೆ ವಾಸುದೇವ ಸಾಮಗ, ಕಪ್ಪೆಕರೆ ಸುಬ್ರಾಯ ಭಾಗವತ, ಪ್ರೊ.ಎಸ್.ವಿ. ಉದಯ ಕುಮಾರ್ ಶೆಟ್ಟಿ, ಕೊಕ್ಕಡ್ತಿ ಕೃಷ್ಣಮೂರ್ತಿ, ಬಂಟ್ವಾಳ ಜಯರಾಮ ಆಚಾರ್ಯ, ಬಿ.ಎಂ.ನಿಂಬಗಲ್ಲು ರುದ್ರಯ್ಯ, ನಾರಾಯಣಪ್ಪ ಕಾರಿಗನೂರು, ಎ.ಎನ್.ಚನ್ನಬಸವಯ್ಯ, ಬಸವಲಿಂಗಪ್ಪ ಗುರುಬಸಪ್ಪ ವಿಭೂತೆ ಈಶ್ವರಚಂದ್ರ ಬೆಟಗೋರಿ ಹಾಗೂ 2014ರ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಉದ್ಯಾವರ ಜಯಕುಮಾರ, ಎಂ.ಎ.ನಾಯ್ಕ, ಕಷ್ಣ ಭಂಡಾರಿ, ಮುದಕಪ್ಪ ಹನುಮಪ್ಪ ಹೊಸೂರ, ಸತ್ಯಕ್ಕ, ಸಣ್ಣ ಪಾಲಯ್ಯ, ನೆಲ್ಲಿಗೆರೆ ತಿಮ್ಮಪ್ಪಚಾರ್, ಮಹದೇವಪ್ಪ ಅವರಾಧಿ ಮತ್ತು ಸಣ್ಣಬಸಣ್ಣ ಅವರಿಗೆ ಫಲಪುಷ್ಪ ಸ್ಮರಣಿಕೆಯೊಂದಿಗೆ 10 ಸಾವಿರ ನಗದನ್ನು ನೀಡಿ ಸಚಿವೆ ಉಮಾಶ್ರೀ ಗೌರವಿಸಿದರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿಯ ರಿಜಿಸ್ಟಾರ್ ಡಿ.ಆರ್. ಮೈಥಿಲಿ ಸ್ವಾಗತಿಸಿದರು. ಅಕಾಡೆಮಿಯ ಸದಸ್ಯ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿಯ ಸದ್ಯರಾದ ಪಿ. ಕಿಶನ್ ಹೆಗ್ಡೆ, ಡಾ. ವಿಜಯ ನಳಿನಿ ರಮೇಶ್, ಪತ್ರಕರ್ತರಾದ ಚಂದ್ರಶೇಖರ ಬೀಜಾಡಿ, ರಾಜೇಶ್ ಗಾಣಿಗ ಅಚ್ಲಾಡಿ, ಪ್ರಭಾಕರ ಆಚಾರ್ಯ, ರಾಮಕಷ್ಣ ಹೇರ್ಳೇ ಮೊದಲಾದವರು ಸನ್ಮಾನ ಪತ್ರ ವಾಚಿಸಿದರು. ಅಕಾಡೆಮಿಯ ಸದಸ್ಯ ಕೆ.ಎಂ. ಶೇಖರ್ ಕಾರ್ಯಕ್ರಮ ನಿರೂಪಿಸಿದರು.

ಏಕೈಕ ಮಹಿಳಾ ಪ್ರತಿನಿಧಿ ಸತ್ಯಕ್ಕ: ಯಕ್ಷಗಾನ ಬಯಲಾಟ ಅಕಾಡೆಮಿಯ ಪ್ರಶಸ್ತಿ ಪ್ರದಾನದಲ್ಲಿ ಒಟ್ಟು 3 ಮಂದಿಗೆ ಪಾರ್ತಿ ಸುಬ್ಬ ಪ್ರಶಸ್ತಿ ನೀಡಿ ಗೌರವಿಸಿದರೆ, 19 ಮಂದಿಗೆ ಗೌರವ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಈ ಕಾರ್ಯಕ್ರಮದಲ್ಲಿ 22 ಮಂದಿ ಪ್ರಶಸ್ತಿ ಪುರಸ್ಕೃತರಲ್ಲಿ 21 ಮಂದಿ ಪುರುಷರಾದರೆ, ಕೇವಲ ಓರ್ವ ಮಹಿಳೆ ಪ್ರಶಸ್ತಿ ಸ್ವೀಕರಿಸಿದರು. ಆ ಏಕೈಕ ಮಹಿಳಾ ಪ್ರತಿನಿಧಿ ತೊಗಲು ಗೊಂಬೆಯಾಟದ ಸತ್ಯಕ್ಕ ಆಗಿದ್ದರು. ಸತ್ಯಕ್ಕನನ್ನು ಸನ್ಮಾನದ ಆಸನಕ್ಕೆ ಕರೆಯುತ್ತಿದ್ದಂತೆ ಸಚಿವೆ ಉಮಾಶ್ರೀಯತ್ತ ಮುಗುಳ್ನಗೆ ಬೀರುತ್ತಾ ಆಗಮಿಸಿ ಸನ್ಮಾನದ ಆಸನದಲ್ಲಿ ಆಸೀನರಾದರು. ಸಚಿವೆ ಉಮಾಶ್ರೀಯೆ ಸತ್ಯಕ್ಕನ ಬಳಿ ಹೋಗಿ ಕುಶಲೋಪಚಾರ ನಡೆಸಿರುವುದು ವಿಶೇಷವಾಗಿತ್ತು.



ಕೃಪೆ : http://vijaykarnataka.com

Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
     



    ತಾಜಾ ಲೇಖನಗಳು
     
    ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
    ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
    ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
     
    © ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ